Friday, February 26, 2010

ಪ್ರೀತಿಯ ಉಪಟಳ

ಹುಡುಗಿಯ ಕಿರು ನಗೆಗೆ ಸೋತ ಹುಡುಗನು 
ಹುಡುಗಿಯ ಪ್ರೀತಿಸಲು ಹೊರಡುವನು
ಆ ಹುಡುಗಿಯು ಅವನ ಪ್ರೀತಿಯ ತಿಳಿಯಳು
ಆಗ ಹುಡುಗನಿಗೆ  ತನ್ನಯ ಸವಾಲುಗಳನ್ನು ತಿಳಿಸುವಳು.

ಆ ಸವಾಲುಗಳು ಹೇಗೆ ಇರಲಿ ಅದನ್ನು ಲೆಕ್ಕಿಸದೇ
ಅವುಗಳನ್ನು ಎದುರಿಸಲು ಹುಡುಗನು ತಯಾರಾಗುತ್ತಾನೆ
ತನ್ನಲಿಯ  ಸಾಮರ್ಥ್ಯವನ್ನು ಅವಳಿಗೆ ತೋರ್ಪಡಿಸುವುದೇ
ತನ್ನಯ ಗುರಿ ಎಂದು ಮುನ್ನುಗ್ಗಿ  ಎದುರಿಸುತ್ತಾ ಹೊರಡುತ್ತಾನೆ.

ಹುಡುಗನ ಆ ಶೌರ್ಯಕ್ಕೆ ಮರುಳಾದ ಹುಡುಗಿಯು
ಅವನ ಹೃದಯ ಗೀತೆಯನ್ನು ಸವಿಯಲು ಹಾತೊರೆಯುವಳು
ಆ ನಂತರ ಅವರಲ್ಲಿ ಮೂಡುವುದೇ ಸುಂದರವಾದ ಪ್ರೀತಿ
ಆ ಮೇಲೆ ಹುಟ್ಟುವುದು ಅವರಿಬ್ಬರ ನಡುವೆ ಮದುವೆಯೆಂಬ ಭೀತಿ.

ಈಗ ಅವರಿಬ್ಬರಿಗೆ ಅರಿವಾಗುವುದು ಜಾತಿಯೆಂಬ ಭೂತ
ಅದರಿಂದ ಅವರಿಗೆ ತಮ್ಮ ಅಪ್ಪ ಅಮ್ಮನ ನೆನಪಿಗೆ ಬಂದು
ಅವರಲ್ಲಿ ಮೂಡುವುದು ಭಯವೆಂಬ ಸಂಭೂತ
ಇದರ ನಡುವೆ ಹುಡುಗಿಗೆ ತವರಿನ ಚಿಂತೆ ನೆನಪಾಗುವುದು.

ಆ ಚಿಂತೆಯಲಿ ಹುಡುಗಿಗೆ ಮರೆವುದು ಸುಂದರ ಪ್ರೀತಿ
ಅವರಿಬ್ಬರ ನಡುವೆ ಮುರಿವುದು ಮಧುರ ಬಂಧ
ಆ ಪ್ರೀತಿಯ ಹುಚ್ಚನಾದ ಹುಡುಗನಿಗೆ ಮೂಡುವುದು ಭೀತಿ
ಅವಳ ಮರೆವುದು ಕಷ್ಟವೆಂದು ತಿಲಿಯದೊದನು ಮುಂದ .

Friday, February 19, 2010

ಸ್ನೇಹಿತನ ದುರ್ಮರಣ

ಹಿಂದೊಂದು ದಿನ ನನ್ನ ಸ್ನೇಹಿತನು ಪ್ರೀತಿಗೆ ಶರಣಾದನು
ಆ ಪ್ರೀತಿಯು ಇಂದು ಅವನನ್ನ ಪರಲೋಕಕ್ಕೆ ದೂಡಿದೆ
ಅವನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತಿಯೆನು
ಅವನಿಲ್ಲದೆ ಅವನ ಮನೆಯಲ್ಲಿ  ಕಗ್ಗತ್ತಲೆಯ ಛಾಯೆ ಮೂಡಿದೆ.

Thursday, February 11, 2010

ಮುಂಜಾನೆ ಮಬ್ಬಲಿ ಇಬ್ಬನಿ ಸಿಂಚನ
ದಿನದ ಕಾರ್ಯಕ್ಕೆ ದಿನಕರನ ಆಗಮನ
ಆ ಬೆಳಗಿನ ಇಂಪಿಗೆ ತೆರೆದಿವೆ ನಮ್ಮಯ ನಯನ 
ದಿನದ ದಿನಚರಿಗೆ ನೆಟ್ಟಿದೆ ನಮ್ಮಯ ಗಮನ.

ಮುಂಜಾನೆ-ಇರುಳಿನ ನಡುವೆ ಅಡಗಿದೆ ನಮ್ಮಯ ಜೀವನ
ಬದುಕ ಬವಣೆಗೆ ಕಾಯಕವೆಂಬ ಮದ್ದಿನೌತನ
ಆ ಮದ್ದಿನಲ್ಲಡಗಿದೆ ನಮ್ಮಯ ಸುಖ ದುಃಖಗಳ ಮಿಲನ
ಅದುವೇ ನಮ್ಮ ಬದುಕಿನ ಗಾಯನ.





Monday, February 8, 2010

 ಮನದಾಳದ ಮಾತಿಗೆ ಮರುಳಾದೆ ಅಂದು
 ಆದ ಕಾರಣ ಹೀಗಿರುವೆನು ಇಂದು
 ಅವಳ ಆ ಕಿರು ನಗೆಗೆ ಮನಸೋತೆನು ಅಂದು
 ನನ್ನೀ ಪ್ರೀತಿಯನ್ನು ತಿಳಿಯದೋದಳು ಇಂದು.

Thursday, February 4, 2010

ಮರೆತು ಹೋಗಬೇಡಿ ನೋವಾಗುತ್ತೆ
ಕಳೆದುಕೊಳ್ಳಬೇಡಿ ದುಃಖ ಆಗುತ್ತೆ
ಮೌನವಿರಬೇಡಿ ಮನಸಿಗೆ ಮೋಸವಾಗುತ್ತೆ
ನನ್ನ ನೆನಪು ಮರಿಬೇಡಿ ಪ್ರೀತಿಗೆ ಅರ್ಥ ಇಲ್ಲದಂತೆ ಆಗುತ್ತೆ .
ಬೆಳಗಿನ ಬೆಳಕಿಗೆ ಸೂರ್ಯನ ಸ್ಪರ್ಷ
ಇರುಳಿನ ಬೆಳಕಿಗೆ ಚಂದ್ರನ ಕಾಂತಿ
ನೀ ನನ್ನ ಸನಿಹವಿದ್ದರೆ ನನಗದುವೆ ಹರ್ಷ
ನೀ ಆಗುವೆಯ ನನ್ನ ಬಾಳಿನ ಸಂಗಾತಿ ?.
ಸವಿಯಾಗಿ ಬರೆಯಲು ಕವಿ ನಾನಲ್ಲ
ಚಿರವಾಗಿ ಉಳಿಯಲು ಈ ಭೂಮಿ ನನದಲ್ಲ
ಏನೆಂದು ಬರೆಯಲಿ ಈ ಅಳಿಸಿ ಹೋಗುವ ಶಾಯಿಯಲ್ಲಿ
ನಿನ್ನ ನೆನಪೊಂದೆ ಅಮರ ಈ ಪುಟ್ಟ ಹೃದಯದಲ್ಲಿ .