ಹುಡುಗಿಯ ಕಿರು ನಗೆಗೆ ಸೋತ ಹುಡುಗನು
ಹುಡುಗಿಯ ಪ್ರೀತಿಸಲು ಹೊರಡುವನು
ಆ ಹುಡುಗಿಯು ಅವನ ಪ್ರೀತಿಯ ತಿಳಿಯಳು
ಆಗ ಹುಡುಗನಿಗೆ ತನ್ನಯ ಸವಾಲುಗಳನ್ನು ತಿಳಿಸುವಳು.
ಆ ಸವಾಲುಗಳು ಹೇಗೆ ಇರಲಿ ಅದನ್ನು ಲೆಕ್ಕಿಸದೇ
ಅವುಗಳನ್ನು ಎದುರಿಸಲು ಹುಡುಗನು ತಯಾರಾಗುತ್ತಾನೆ
ತನ್ನಲಿಯ ಸಾಮರ್ಥ್ಯವನ್ನು ಅವಳಿಗೆ ತೋರ್ಪಡಿಸುವುದೇ
ತನ್ನಯ ಗುರಿ ಎಂದು ಮುನ್ನುಗ್ಗಿ ಎದುರಿಸುತ್ತಾ ಹೊರಡುತ್ತಾನೆ.
ಹುಡುಗನ ಆ ಶೌರ್ಯಕ್ಕೆ ಮರುಳಾದ ಹುಡುಗಿಯು
ಅವನ ಹೃದಯ ಗೀತೆಯನ್ನು ಸವಿಯಲು ಹಾತೊರೆಯುವಳು
ಆ ನಂತರ ಅವರಲ್ಲಿ ಮೂಡುವುದೇ ಸುಂದರವಾದ ಪ್ರೀತಿ
ಆ ಮೇಲೆ ಹುಟ್ಟುವುದು ಅವರಿಬ್ಬರ ನಡುವೆ ಮದುವೆಯೆಂಬ ಭೀತಿ.
ಈಗ ಅವರಿಬ್ಬರಿಗೆ ಅರಿವಾಗುವುದು ಜಾತಿಯೆಂಬ ಭೂತ
ಅದರಿಂದ ಅವರಿಗೆ ತಮ್ಮ ಅಪ್ಪ ಅಮ್ಮನ ನೆನಪಿಗೆ ಬಂದು
ಅವರಲ್ಲಿ ಮೂಡುವುದು ಭಯವೆಂಬ ಸಂಭೂತ
ಇದರ ನಡುವೆ ಹುಡುಗಿಗೆ ತವರಿನ ಚಿಂತೆ ನೆನಪಾಗುವುದು.
ಆ ಚಿಂತೆಯಲಿ ಹುಡುಗಿಗೆ ಮರೆವುದು ಸುಂದರ ಪ್ರೀತಿ
ಅವರಿಬ್ಬರ ನಡುವೆ ಮುರಿವುದು ಮಧುರ ಬಂಧ
ಆ ಪ್ರೀತಿಯ ಹುಚ್ಚನಾದ ಹುಡುಗನಿಗೆ ಮೂಡುವುದು ಭೀತಿ
ಅವಳ ಮರೆವುದು ಕಷ್ಟವೆಂದು ತಿಲಿಯದೊದನು ಮುಂದ .
Friday, February 26, 2010
Friday, February 19, 2010
ಸ್ನೇಹಿತನ ದುರ್ಮರಣ
ಹಿಂದೊಂದು ದಿನ ನನ್ನ ಸ್ನೇಹಿತನು ಪ್ರೀತಿಗೆ ಶರಣಾದನು
ಆ ಪ್ರೀತಿಯು ಇಂದು ಅವನನ್ನ ಪರಲೋಕಕ್ಕೆ ದೂಡಿದೆ
ಅವನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತಿಯೆನು
ಅವನಿಲ್ಲದೆ ಅವನ ಮನೆಯಲ್ಲಿ ಕಗ್ಗತ್ತಲೆಯ ಛಾಯೆ ಮೂಡಿದೆ.
ಆ ಪ್ರೀತಿಯು ಇಂದು ಅವನನ್ನ ಪರಲೋಕಕ್ಕೆ ದೂಡಿದೆ
ಅವನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತಿಯೆನು
ಅವನಿಲ್ಲದೆ ಅವನ ಮನೆಯಲ್ಲಿ ಕಗ್ಗತ್ತಲೆಯ ಛಾಯೆ ಮೂಡಿದೆ.
Thursday, February 11, 2010
Monday, February 8, 2010
Thursday, February 4, 2010
Tuesday, February 2, 2010
ಅವಳ್ಯಾರೋ ನಾನ್ಯಾರೋ ?
ನಮ್ಮಿಬ್ಬರ ಪ್ರೀತಿ ತಿಳಿದೋರು ಯಾರೋ ?
ಅವಳೆಂದರೆ ನನಗೆ ಬಲು ಇಷ್ಟ !
ಹಾಗೆಯೇ ಅವಳ ನೆನಪು ಮರೆವುದು ಬಲು ಕಷ್ಟ !.
ಗಾಳಿನ ಇಷ್ಟಪಟ್ಟೆ ಹಿಡಿಯೋಕೆ ಆಗಿಲ್ಲ
ಆಕಾಶನ ಇಷ್ಟಪಟ್ಟೆ ಮುಟ್ಟೋಕೆ ಆಗಿಲ್ಲ
ಸಮುದ್ರಾನ ಇಷ್ಟಪಟ್ಟೆ ದಾಟೋಕೆ ಆಗಿಲ್ಲ
ನಿಮ್ಮನ್ನ ಇಷ್ಟಪಟ್ಟೆ ಮರಿಯೋಕೆ ಆಗ್ತಿಲ್ಲ .
ನಾ ನಿನಗೆ ಪ್ರೇಮ ಪತ್ರ ಕೊಡಲೆನಿಸುತಿರಲು
ನನ್ನ ತನುವಿಗೆ ಭಯದ ಛಾಯೆ ಮೂಡಿದೆ
ನಿನ್ನೀ ಪ್ರೇಮದ ವ್ಯಾಮೋಹಕ್ಕೆ ನಾ ನನ್ನನ್ನೇ ಮರೆತು ನಿನ್ನ ಕಡೆ ಧಾವಿಸಲು
ನನ್ನ ಹೃದಯದಲ್ಲಿ ಏನೋ ಮೂಡಿದಂತೆ ಭಾಸವಾಗಿದೆ.
ನಮ್ಮಿಬ್ಬರ ಪ್ರೀತಿ ತಿಳಿದೋರು ಯಾರೋ ?
ಅವಳೆಂದರೆ ನನಗೆ ಬಲು ಇಷ್ಟ !
ಹಾಗೆಯೇ ಅವಳ ನೆನಪು ಮರೆವುದು ಬಲು ಕಷ್ಟ !.
ಗಾಳಿನ ಇಷ್ಟಪಟ್ಟೆ ಹಿಡಿಯೋಕೆ ಆಗಿಲ್ಲ
ಆಕಾಶನ ಇಷ್ಟಪಟ್ಟೆ ಮುಟ್ಟೋಕೆ ಆಗಿಲ್ಲ
ಸಮುದ್ರಾನ ಇಷ್ಟಪಟ್ಟೆ ದಾಟೋಕೆ ಆಗಿಲ್ಲ
ನಿಮ್ಮನ್ನ ಇಷ್ಟಪಟ್ಟೆ ಮರಿಯೋಕೆ ಆಗ್ತಿಲ್ಲ .
ನಾ ನಿನಗೆ ಪ್ರೇಮ ಪತ್ರ ಕೊಡಲೆನಿಸುತಿರಲು
ನನ್ನ ತನುವಿಗೆ ಭಯದ ಛಾಯೆ ಮೂಡಿದೆ
ನಿನ್ನೀ ಪ್ರೇಮದ ವ್ಯಾಮೋಹಕ್ಕೆ ನಾ ನನ್ನನ್ನೇ ಮರೆತು ನಿನ್ನ ಕಡೆ ಧಾವಿಸಲು
ನನ್ನ ಹೃದಯದಲ್ಲಿ ಏನೋ ಮೂಡಿದಂತೆ ಭಾಸವಾಗಿದೆ.
Subscribe to:
Posts (Atom)