Friday, February 26, 2010

ಪ್ರೀತಿಯ ಉಪಟಳ

ಹುಡುಗಿಯ ಕಿರು ನಗೆಗೆ ಸೋತ ಹುಡುಗನು 
ಹುಡುಗಿಯ ಪ್ರೀತಿಸಲು ಹೊರಡುವನು
ಆ ಹುಡುಗಿಯು ಅವನ ಪ್ರೀತಿಯ ತಿಳಿಯಳು
ಆಗ ಹುಡುಗನಿಗೆ  ತನ್ನಯ ಸವಾಲುಗಳನ್ನು ತಿಳಿಸುವಳು.

ಆ ಸವಾಲುಗಳು ಹೇಗೆ ಇರಲಿ ಅದನ್ನು ಲೆಕ್ಕಿಸದೇ
ಅವುಗಳನ್ನು ಎದುರಿಸಲು ಹುಡುಗನು ತಯಾರಾಗುತ್ತಾನೆ
ತನ್ನಲಿಯ  ಸಾಮರ್ಥ್ಯವನ್ನು ಅವಳಿಗೆ ತೋರ್ಪಡಿಸುವುದೇ
ತನ್ನಯ ಗುರಿ ಎಂದು ಮುನ್ನುಗ್ಗಿ  ಎದುರಿಸುತ್ತಾ ಹೊರಡುತ್ತಾನೆ.

ಹುಡುಗನ ಆ ಶೌರ್ಯಕ್ಕೆ ಮರುಳಾದ ಹುಡುಗಿಯು
ಅವನ ಹೃದಯ ಗೀತೆಯನ್ನು ಸವಿಯಲು ಹಾತೊರೆಯುವಳು
ಆ ನಂತರ ಅವರಲ್ಲಿ ಮೂಡುವುದೇ ಸುಂದರವಾದ ಪ್ರೀತಿ
ಆ ಮೇಲೆ ಹುಟ್ಟುವುದು ಅವರಿಬ್ಬರ ನಡುವೆ ಮದುವೆಯೆಂಬ ಭೀತಿ.

ಈಗ ಅವರಿಬ್ಬರಿಗೆ ಅರಿವಾಗುವುದು ಜಾತಿಯೆಂಬ ಭೂತ
ಅದರಿಂದ ಅವರಿಗೆ ತಮ್ಮ ಅಪ್ಪ ಅಮ್ಮನ ನೆನಪಿಗೆ ಬಂದು
ಅವರಲ್ಲಿ ಮೂಡುವುದು ಭಯವೆಂಬ ಸಂಭೂತ
ಇದರ ನಡುವೆ ಹುಡುಗಿಗೆ ತವರಿನ ಚಿಂತೆ ನೆನಪಾಗುವುದು.

ಆ ಚಿಂತೆಯಲಿ ಹುಡುಗಿಗೆ ಮರೆವುದು ಸುಂದರ ಪ್ರೀತಿ
ಅವರಿಬ್ಬರ ನಡುವೆ ಮುರಿವುದು ಮಧುರ ಬಂಧ
ಆ ಪ್ರೀತಿಯ ಹುಚ್ಚನಾದ ಹುಡುಗನಿಗೆ ಮೂಡುವುದು ಭೀತಿ
ಅವಳ ಮರೆವುದು ಕಷ್ಟವೆಂದು ತಿಲಿಯದೊದನು ಮುಂದ .

No comments:

Post a Comment